Jayakirana Morning News
Headlines News :

Test Footer

breakingnews
Powered by Blogger.

Latest Post

`ನಾಗರಿಕರ ಹಕ್ಕು ಕಸಿಯುವ ಯೋಜನೆಗಳು ಬೇಡ'

Written By Umanatha Shetty on Thursday, 21 August 2014 | 22:38

ಮುಂಬಯಿ: ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುವಂತಹ ಯೋಜನೆ ಅನುಷ್ಠಾನಗೊಳಿಸಲು ಮುಂದಾದರೆ ಹಲವು ಅನಾಹುತಕಾರಿ ಬೆಳವಣಿಗೆ ನಡೆಯುವ ಸಾಧ್ಯತೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಕುದುರೆಮುಖ ರಕ್ಷಿತಾರಣ್ಯ ಪ್ರದೇಶದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ ಹುಲಿ ಯೋಜನೆಯಿಂದ ತಲಾತಲಾಂ ತರ ವರ್ಷಗಳಿಂದ ಬಾಳಿಬದುಕು ಳಿದಿರುವಂತಹ ನಾಗರಿಕರು ಬೀದಿ ಪಾಲಾಗಲಿದ್ದಾರೆ. ಅವರು ಆಚರಿಸಿ ಕೊಂಡು ಬಂದಿರುವ ಸಂಸ್ಕøತಿ ನಶಿಸ ಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಶಿರ್ಲಾಲು ಗಣೇಶ ಕಟ್ಟೆ ಸಭಾ ಭವನದಲ್ಲಿ ಹುಲಿ ಸಂರಕ್ಷಣಾ ವಿರೋಧಿ ಸಮಿತಿಯ ವತಿಯಿಂದ ಗುರುವಾರ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 2011ರಲ್ಲಿ ಕೇಂದ್ರ ಸರಕಾರವು ಹುಲಿ ಯೋಜನೆಯನ್ನು ಅನುಷ್ಟಾನಗೊಳಿ ಸುತ್ತದೆ ಎಂಬ ಸುದ್ದಿ ತಿಳಿದಾಕ್ಷಣ ಹೋರಾಟಕ್ಕೆ ಮುಂದಾದೆ. ಈ ಭಾಗದ ಜನತೆಯ ಜತೆ ಆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದೆ. ಬಳಿಕ ಇದಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿ ದ್ದೇವೆ ಎಂದು ಹೇಳಿದ್ದೆ. ಮುಂದೆ ಮಗದೊಮ್ಮೆ ಈ ಪ್ರಸ್ತಾವನೆ ಬಂದಲ್ಲಿ ಹೋರಾಟಕ್ಕೆ ಸಿದ್ದರಾಗುವಂತೆ ಮನವಿ ಮಾಡಿದ್ದೆ. ಇದೀಗ ಅಂದಿನ ಕೇಂದ್ರ ಸರಕಾರ ಹಾಗೂ ಈ ರಾಜ್ಯ ಸರಕಾರದ ಕೊಡುಗೆಯಾಗಿರುವ ಈ ಹುಲಿಯೋಜನೆಯನ್ನು ಈ ಭಾಗದಿಂದ ಹಿಮ್ಮೆಟ್ಟಿಸುವ ಎಲ್ಲಾ ಪ್ರಯತ್ನಗಳಿಗೂ ನಾನು ಸಿದ್ದನಿದ್ದು, ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
ಹುಲಿ ಯೋಜನೆ ವಿರೋಧಿಸಿ ತಾಲೂಕು ಪಂಚಾಯತ್‍ನಿಂದ ವಿಶೇಷ ಸಭೆ ಕರೆಯುವಂತೆ ಅವರು ಸೂಚನೆ ನೀಡಿದರು.
ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿ, ಕಸ್ತೂರಿ ರಂಗನ್ ವರದಿ, ರಾಷ್ಟ್ರೀಯ ಉದ್ಯಾನ ವನ, ಹುಲಿ ಯೋಜನೆ ಮುಂತಾದ ಕಾರ್ಯಕ್ರಮಗಳಿಂದ ಪಶ್ಚಿಮಘಟ್ಟದ ಜನತೆ ಭಯಭೀತರಾಗಿದ್ದಾರೆ. ಒಂದಿ ಲ್ಲೊಂದು ಸುದ್ದಿಗಳು ಈ ಭಾಗದಲ್ಲಿ ಸದ್ದು ಮಾಡುತ್ತಿದ್ದು, ಇಲ್ಲಿನ ಜನತೆಯ ನಿದ್ದೆಗೆಡಿಸುತ್ತಿದೆ. ರಾಜಕೀಯ ರಹಿತ ವಾದ ಹೋರಾಟದ ಮೂಲಕ ನಮಗೆ ನ್ಯಾಯ ದೊರಕಬೇಕಾಗಿದ್ದು, ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಶಿರ್ಲಾಲು ಗ್ರಾ.ಪಂ. ಅಧ್ಯಕ್ಷ ನಾರಾಯಣ ಶೆಟ್ಟಿ, ಜಿ. ಪಂ. ಸದಸ್ಯೆ ಮಮತಾ ಅಧಿಕಾರಿ, ತಾ.ಪಂ. ಅಧ್ಯಕ್ಷೆ ವಿಜಯ ಕುಮಾರಿ, ಎಪಿಎಂಸಿ ಸದಸ್ಯ ಸುಂದರ ಗೌಡ, ಕೃಷ್ಣ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

ಸರಣಿಯಲ್ಲಿ ಕ್ಲೀನ್‍ಸ್ವೀಪ್ ಸಾಧಿಸಿದ ಆಫ್ರಿಕಾ

ತೃತೀಯ ಏಕದಿನದಲ್ಲೂ ಮುಗ್ಗರಿಸಿದ ಜಿಂಬಾಬ್ವೆ
ಬುಲವಾಯೊ: ಇಲ್ಲಿ ಆತಿಥೇಯ ಜಿಂಬಾವ್ವೆ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು ಕೂಡ ಸುಲಭ ಅಂತರದಲ್ಲಿ ಗೆದ್ದುಕೊಂಡ ಪ್ರವಾಸಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಕ್ಲೀನ್‍ಸ್ವೀಪ್ ಸಾಧಿಸಿದೆ. ಕ್ವಿಂಟನ್ ಡಿ ಕಾಕ್ ಆಕರ್ಷಕ 84 ರನ್ ಗಳಿಸಿ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಾಸ್ ಸೋತು ಬ್ಯಾಟಿಂಗ್ ನಡೆ ಸಿದ ಜಿಂಬಾಬ್ವೆ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಮರ್ಚಂಟ್ ಡೆ ಲಾಂಗೆ ಹಾಗೂ ಅಬ್ಬೊಟ್ ಬೌಲಿಂಗ್ ದಾಳಿಗೆ ಉತ್ತರ ಕೊಡುವಲ್ಲಿ ಜಿಂಬಾಬ್ವೆ ಪಡೆ ಎಡವಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಎಲ್ಟನ್ ಚಿಗುಂಬುರಾ ಆಕರ್ಷಕ 90 ರನ್‍ಗಳ ಏಕಾಂಗಿ ಹೋರಾಟ ನಡೆಸಿದರು. ಆದರೂ ತಂಡ 39.5 ಓವರ್‍ಗಳಲ್ಲಿ 165 ರನ್‍ಗಳಿಗೆ ಸರ್ವಪತನ ಕಂಡಿತು. ಚಿಗುಂಬುರಾ ತನ್ನ ಆಕರ್ಷಕ ಆಟದಲ್ಲಿ ಹತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದ್ದರು. ಆಫ್ರಿಕಾ ಪರ ಮರ್ಚಂಟ್ ಮೂರು ಹಾಗೂ ಅಬ್ಬೊಟ್ ಎರಡು ವಿಕೆಟ್ ಪಡೆದರು.ಇನ್ನು ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮೊತ್ತವನ್ನು ಸುಲಭ ಅಂತರ ದಲ್ಲೇ ಗೆದ್ದುಕೊಂಡು ಸರಣಿಯಲ್ಲಿ ಕ್ಲೀನ್‍ಸ್ವೀಪ್ ಸಾಧಿಸಿತು. ಮುಖ್ಯವಾಗಿ ಆರಂಭಿಕ ಕ್ವಿಂಟನ್ ಡಿ ಕಾಕ್ ಆಕರ್ಷಕ ಆಟ ಪ್ರದರ್ಶಿಸಿದರು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಫ್ಲಾಪ್ ಡು ಪ್ಲೆಸ್ಸಿಸ್ (40) ಕೆಲಹೊತ್ತು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಪರಿಣಾಮ ಕೇವಲ 27.2 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಆಫ್ರಿಕಾ ಗೆಲುವು ಸಾಧಿಸಿತು. ಕ್ವಿಂಟನ್ ಡಿ ಕಾಕ್ ತನ್ನ ಆಟದಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ದಾಖಲಿಸಿದ್ದರೆ ಡುಪ್ಲೆಸ್ಸಿಸ್ ವೇಗದ 40 ರನ್ ಗಳಿಸಿದರು. ಪಂದ್ಯದಲ್ಲಿ ಆಫ್ರಿಕಾದ ರಿಲೆ ರೌಸ್ಸೊ ಹಾಗೂ ಥೊಕೊಸ್ಸಿಸ್ ಶೆಝಿ ಪಂದ್ಯದಲ್ಲಿ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಅತ್ತ ಜಿಂಬಾಬ್ವೆ ಪರ ಸೀನ್ ವಿಲಿಯಮ್ಸನ್ ಹಾಗೂ ಪನ್ಯಾಂಗಾರಾ ತಲಾ ಒಂದು ವಿಕೆಟ್ ಪಡೆದರು.

ಯುವತಿಯ ಗ್ಯಾಂಗ್‍ರೇಪ್ ನಗ್ನ ಸ್ಥಿತಿಯಲ್ಲೇ ರಸ್ತೆಗೋಡಿದ ಸಂತ್ರಸ್ತೆ!

ಬೆಂಗಳೂರು: ಗಣ್ಯರೆನಿಸಿಕೊಂಡ ವರ ಮಕ್ಕಳ ಕಚ್ಚೆ ಹರುಕ ಬುದ್ಧಿಯಿಂದ ಯುವತಿಯೊಬ್ಬಳು ತನ್ನ ಮಾನವನ್ನೇ ಕಳೆದುಕೊಂಡ ಘಟನೆ ಇಲ್ಲಿನ ತಾವರೆ ಕೆರೆಯ ಚಿಕ್ಕಮಾರನಹಳ್ಳಿಯೆಂಬಲ್ಲಿ ಸಂಭವಿಸಿದೆ.
ಬಿಹಾರ ಮೂಲದ ಯುವತಿ ಯನ್ನು ಡ್ರಾಪ್ ನೀಡುವ ನೆಪದಲ್ಲಿ ತನ್ನ ಕಾರಿಗೆ ಹತ್ತಿಸಿಕೊಂಡ ಅರುಣ್ ಕುಮಾರ್ ಎಂಬಾತ ಆಕೆಯನ್ನು ಬಲ ವಂತವಾಗಿ ರೆಸಾರ್ಟ್‍ವೊಂದಕ್ಕೆ ಕರೆ ದೊಯ್ದು ತನ್ನಿಬ್ಬರು ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ನಡೆಸಿರುವು ದಾಗಿ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಅತ್ಯಾಚಾರವೆಸಗಿದ ನಂತರ ಆರೋಪಿಗಳು ನಿದ್ದೆಗೆ ಜಾರಿದಾಗ ಹುಟ್ಟುಡುಗೆಯಲ್ಲೇ ರೆಸಾರ್ಟ್‍ನಿಂದ ಹೊರಗೋಡಿ ಬಂದ ಯುವತಿಯನ್ನು ಕಂಡ ಕಾರ್ ಚಾಲಕನೊಬ್ಬ ಆಕೆಯನ್ನು ರಕ್ಷಿಸಿ ಮೊದಲು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ತಾವರೆಕೆರೆ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ದೂರು ದಾಖಲಿಸಿದ್ದಾನೆ.
ಅತ್ಯಾಚಾರಿಗಳ ಪೈಕಿ ಮುಖ್ಯ ಆರೋಪಿ ಅರುಣ್ ಕುಮಾರ್ ಬೆಂಗಳೂರಿನ ಮಾಗಡಿ ಕೆಎಮ್‍ಎಫ್ ನಿರ್ದೇಶಕ ನರಸಿಂಹ ಮೂರ್ತಿಯವರ ಪುತ್ರನೆಂದು ತಿಳಿದುಬಂದಿದೆ. ಉಳಿದಿಬ್ಬರು ಆರೋಪಿಗಳು ಕೂಡಾ ಗಣ್ಯರ ಪುತ್ರರೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಎಸ್‍ಪಿ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದ ಯುವತಿಯು ಮಾನಸಿಕವಾಗಿ ಜರ್ಝರಿತಗೊಂಡಿದ್ದು ಪೊಲೀಸರು ಇನ್ನಷ್ಟೇ ಮುಂದಿನ ವಿಚಾರಣೆ ನಡೆಸಬೇಕಿದೆ.

ರಿಕ್ಷಾ ಚಾಲಕನ ಕೊಲೆ: `ಬಡ್ಡಿ’ಮಗ ಬಂಧನ

ಬೆಳ್ತಂಗಡಿ: ಬಂಟ್ವಾಳ ತಾಲೂಕು ಮಾರಿಪಳ್ಳ ರಿಕ್ಷಾ ಚಾಲಕ ಮಹಮ್ಮದ್ ರಿಫಾಯಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ್ದಾನೆ ಎಂಬ ನೆಲೆಯಲ್ಲಿ ಗಣೇಶ್ ಗೌಡ ಎಂಬಾತನನ್ನು ಬಂಟ್ವಾಳ ಪೊಲೀಸರು ಯಶಸ್ವಿ ಕಾರ್ಯಾಚರಣೆಯಲ್ಲಿ ಬಂಧಿಸಿರುವ ಘಟನೆ ತಡವಾಗಿ ವರದಿಯಾಗಿದೆ.
ಉಜಿರೆ ಗ್ರಾಮದ ಕಾಶಿಬೆಟ್ಟು ಅರಳಿ ಸನಿಹದ ನಿವಾಸಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮಹಾ ದ್ವಾರದ ಬಳಿಯ ಗೂಡಂಗಡಿಯಲ್ಲಿ ಕಬ್ಬಿನ ಹಾಲು ತೆಗೆಯುವ ಕಾರ್ಮಿಕ ನಾಗಿ ದುಡಿಯುತ್ತಿದ್ದ ಗಣೇಶ್ ಗೌಡ(26) ಬಂಧಿತ ಯವಕ. ಪ್ರಕರ ಣದಲ್ಲಿ ಇತರ 7 ಮಂದಿ ಆರೋಪಿ ಗಳನ್ನು ಬಂಧಿಸಲಾಗಿದೆ. ಈ ಎಲ್ಲಾ ಆರೋಪಿಗಳು ಒಂದೊಂದು ರೀತಿ ಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನ ಲಾಗಿದೆÉ. ಈ ಪೈಕಿ ಉಜಿರೆಯಿಂದ ಬಂಧಿಸಲ್ಪಟ್ಟಿರುವ ಗಣೇಶ್ ಗೌಡ ಘಟನಾ ದಿನ ಹಂತಕರೊಂದಿಗೆ ನೇರ ಶಾಮೀಲಾಗಿ ರಿಫಾಯಿ ರಿಕ್ಷಾವನ್ನು ಬಾಡಿಗೆಗೆ ಎಂಗೇಜ್ ಮಾಡಿಕೊಂಡು ಕೊಲೆಗಾರರಿಗೆ ತಮ್ಮ ಕೃತ್ಯ ವೆಸಗಲು ಅನುಕೂಲ ಮಾಡಿ ಕೊಟ್ಟಿದ್ದಾನೆಂದು ಆತ ತಪ್ಪೊಪ್ಪಿಕೊಂಡಿರುವುದಾಗಿ ತನಿಖಾಧಿಕಾರಿ ತಿಳಿಸಿದ್ದಾರೆ.
ಬಡ್ಡಿ ವ್ಯಾಪಾರ ದಂಧೆಯಲ್ಲಿ ನಿರತನಾಗಿದ್ದ ಗಣೇಶ: ಉಜಿರೆಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದನಾದರೂ ಆತ ಕೈತುಂಬಾ ಹಣ ಇಟ್ಟುಕೊಂಡು ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಗ್ರಾಹಕರಿಂದ ಹೆಚ್ಚು ಬಡ್ಡಿಯನ್ನು ವಸೂಲಿ ಮಾಡುತ್ತಿದ್ದ ಮಾತ್ರವಲ್ಲದೆ, ಹಣ ಕೊಡಲು ಒಂದು ದಿನ ತಡವಾದರೂ ಅವರ ಮೇಲೆ ಮನ ಬಂದಂತೆ ಹಲ್ಲೆ ನಡೆಸುವ ಚಾಳಿ ಹೊಂದಿದ್ದ. ತಾನು ದುಡಿಯುತ್ತಿದ್ದ ಅಂಗಡಿಯಿಂದಲೇ ಹಣ ಕದಿಯುವ ಚಾಳಿಯಿದ್ದ ಗಣೇಶ ಅದೇ ಹಣದಿಂದಲೇ ಲಾರಿಯೊಂದನ್ನು ಖರೀದಿಸಿದ್ದ. ಬಳಿಕ ಸರಿಯಾಗಿ ಕಂತಿನ ಹಣ ಪಾವತಿಸದ ಕಾರಣ ಲಾರಿಯನ್ನು ಜಪ್ತಿ ಮಾಡಲಾಗಿತ್ತು. ಉಜಿರೆ ಪರಿಸರದಲ್ಲಿ ನಡೆಯುತ್ತಿದ್ದ ಗುಂಪು ಘರ್ಷಣೆ, ದೊಂಬಿ, ಹಲ್ಲೆ, ನೈತಿಕ ಪೊಲೀಸ್‍ಗಿರಿ, ಬಲತ್ಕಾರದ ವಸೂಲಿ ಬಾಜಿಯಲ್ಲಿ ಈತನು ಭಾಗಿಯಾಗುತ್ತಿದ್ದ. ಈತನ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲವಾರು ಕೇಸು ದಾಖಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲೂ ಈತ ಕೈಯಾಡಿಸಿದ್ದ. ಇತ್ತೀಚೆಗೆ ಬಂಟ್ವಾಳ, ಮಂಗಳೂರಲ್ಲಿ ಕೆಲವರ ಸಂಪರ್ಕ ಸಾಧಿಸಿಕೊಂಡು ದೊಡ್ಡ ಮಟ್ಟದ ಹಣದ ವ್ಯವಹಾರ ನಡೆಸುತ್ತಿದ್ದ. ಎರಡು ವರ್ಷಗಳ ಹಿಂದೆ ಈತನ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಚೆಕ್ ಬೌನ್ಸ್ ಕೇಸು ದಾಖಲಾಗಿದೆ. ಇದರಿಂದಾಗಿ ಕಂಗೆಟ್ಟು ತಾಲೂಕಿನಿಂದಲೇ ಪರಾರಿಯಾಗಿ ಬಂಟ್ವಾಳದಲ್ಲಿ ತಾತ್ಕಾಲಿಕವಾಗಿ ಉಳಿದು ಕೊಂಡಿದ್ದ ಎಂದು ತಿಳಿದುಬಂದಿದೆ.

ವಾಟ್ಸ್...ಆ್ಯಪ್ ಕಿಸ್ಸಿಂಗ್!


ಹೇಳಿಕೇಳಿ ಈಗ ಆ್ಯಪ್ಸ್‍ಗಳ ಯುಗ. ಫೇಸ್‍ಬುಕ್ ಹಳೆಯದಾಯಿತು ಎಂಬಂತೆ ವಾಟ್ಸ್‍ಆ್ಯಪ್ ಯುವಜನತೆಯಲ್ಲಿ ಹೆಚ್ಚಿನ ಕ್ರೇಜ್ ಮೂಡಿಸುತ್ತಿದೆ. ಆದರೆ ಆರೋಗ್ಯಪೂರ್ಣ ಮೋಜಿಗಾಗಿ ಇರಬೇಕಾದ ಇಂತಹ ಸೌಲಭ್ಯಗಳನ್ನು ಯುವಜನತೆ ತಮ್ಮ ವಿಕೃತ ಮೋಜಿಗಾಗಿ ಉಪಯೋಗಿಸುತ್ತಿರುವುದು ದುರದೃಷ್ಟಕರ. ಅದರಲ್ಲೂ ಯುವತಿಯರೇ ಇದಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಅಂಶ. ಇತ್ತೀಚಿಗೆ ಹಲವಾರು ವಿವಾದಾತ್ಮಕ ಪ್ರಸಂಗಗಳಿಗೆ ವಾಟ್ಸ್‍ಆ್ಯಪ್ ಕಾರಣವಾಗುತ್ತಿದೆ. ಕೋಮು ಪರಿಸ್ಥಿತಿ ಇರಲಿ ಅಥವಾ ಸಮಾಜದ ಸಾಸ್ಥ್ಯ ಕೆಡಿಸುವ ಇಂತಹ ವಿಚಾ ರಗಳಿಗೆ ಯಾವಾಗ ಕೊನೆ ಬೀಳುವುದೋ ಎಂಬುದು ಪ್ರಜ್ಞಾವಂತರಿಗೆ ಪ್ರಶ್ನೆಯಾಗಿ ಕಾಡುತ್ತಿದೆ.

ಮಂಗಳೂರು: ಗುರುಪುರ ಕೈಕಂಬದ ಜೋಡಿಹಕ್ಕಿಗಳ ಹಾಟ್ ಕಿಸ್ಸಿಂಗ್ ಸೀನ್ ಒಂದು ವಾಟ್ಸ್‍ಆ್ಯಪ್ ನಲ್ಲಿ ಒಬ್ಬರಿಂದೊಬ್ಬರಿಗೆ ಹರಿದಾಡು ತ್ತಿದ್ದು, ಪಡ್ಡೆಗಳ ಪಾಲಿಗೆ ರಸದೌತಣ ಒದಗಿಸಿದ್ದಷ್ಟೇ ಅಲ್ಲದೆ ಆತಂಕಕ್ಕೂ ಕಾರಣವಾಗಿದೆ.
ವೃತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿರುವ ಗುರುಪುರ ಕೈಕಂಬ ಸಮೀಪದ ಈತ ಶೋಕಿ ಜೀವನ ನಡೆಸಲು ಬೈಕ್ ಖರೀದಿಸಿ ಹುಡುಗಿಯರನ್ನು ಪಟಾಯಿಸು ವುದನ್ನೇ ಕಾಯಕ ಮಾಡಿಕೊಂಡಿದ್ದಾನೆ ಎಂದು ಸಾರ್ವಜನಿಕರು ಹೇಳು ತ್ತಿದ್ದಾರೆ.
ಇಲ್ಲಿನ ಸ್ಥಳೀಯ ಬಡ ಯುವತಿ ಯನ್ನು ತನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಪಟಾಯಿಸಿದ ಈತ ಒಂದು ದಿನ ತನ್ನ ಫ್ರೆಂಡ್ ಜೊತೆ ಪಿಕ್‍ಅಪ್ ಮಾಡಿಕೊಂಡು ಹೋಗಿದ್ದಾನೆ. ನಂತರ ಆಕೆಯನ್ನು ತನ್ನ ಗೆಳೆಯರ ಮುಂದೆ ನಿಲ್ಲಿಸಿ ಯುವತಿಯ ತುಟಿಗೆ ತನ್ನ ತುಟಿಯಿಂದ ಮುದ್ರೆಯೊತ್ತಿದ್ದಾನೆ ಎನ್ನಲಾಗಿದೆ. ಈ ದೃಶ್ಯವನ್ನು ಗೆಳೆಯರಲ್ಲಿ ಮೊಬೈಲ್ ಮೂಲಕ ಚಿತ್ರೀಕರಿಸಲು ಹೇಳಿ ಬಳಿಕ ವಾಟ್ಸ್‍ಆ್ಯಪ್‍ನಲ್ಲಿ ಒಬ್ಬರಿಂದೊಬ್ಬರಿಗೆ ಕಳಿಸಿ ವಿಕಟನಗೆ ಬೀರುತ್ತಿದ್ದಾನೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಗುರುಪುರ ಕೈಕಂಬದಲ್ಲಿ ಅದೆಷ್ಟೋ ಬಡಯುವತಿಯರು ತಮ್ಮ ಹೊಟ್ಟೆಪಾಡಿಗಾಗಿ ಶಾಪ್‍ಗಳಲ್ಲಿ ಚಿಕ್ಕಾಸಿನ ಸಂಬಳಕ್ಕಾಗಿ ಜೀತದಂತೆ ದುಡಿಯುತ್ತಿದ್ದಾರೆ. ಇಂಥವರನ್ನೇ ಬುಟ್ಟಿಗೆ ಹಾಕುವ ಕೆಲಸ ಮಾಡುವ ಕೆಲವು ಹಡಬೆ ಯುವಕರು ಕೈಕಂಬದಲ್ಲಿ ಸಾಮಾನ್ಯವಾಗಿದ್ದು, ಯುವತಿಯರ ಬಾಳಲ್ಲಿ ಚೆಲ್ಲಾಟವಾಡುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ಒದಗಿಸಿದ್ದಾರೆ. ಸದ್ಯ ಈಗ ಮೊಬೈಲ್‍ನಲ್ಲಿ ಹರಿದಾಡುತ್ತಿರುವ ಹಾಟ್‍ಕಿಸ್ಸಿಂಗ್ ಸೀನ್ ಚರ್ಚೆಯ ಕೇಂದ್ರಬಿಂದುವಾಗಿದೆ.

ವೃದ್ಧೆಯ ಹತ್ಯೆ


ಕುಂದಾಪುರ: ಕೋಟ ಸಮೀಪದ ಮಣೂರು ಗ್ರಾಮದಲ್ಲಿ ಒಂಟಿ ವೃದ್ಧೆ ಯೋರ್ವರನ್ನು ಚಿನ್ನಾಭರಣದ ಸಲುವಾಗಿ ಹತ್ಯೆ ನಡೆಸಿರುವ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ನೂತನ ಎಸ್ಪಿ ಅವರಿಗೆ ಇದು ದೊಡ್ಡ ಸವಾಲಾಗಿದೆ.
ಮಣೂರು ಬಾಳೆಬೆಟ್ಟು ನಿವಾಸಿ ಗಿರಿಜಾ ಯಾನೆ ಗಿರಿಜಮ್ಮ ಉರಾಳ (84) ಹತ್ಯೆಗೊಳಗಾದವರು. ಮಕ್ಕಳಿ ಲ್ಲದ ಗಿರಿಜಮ್ಮ ಅವರು ತಮ್ಮ ಪತಿಯ ನಿಧನದÀ ಬಳಿಕ 25 ವರ್ಷಗಳಿಂದಲೂ ಮಣೂರಿನ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇರುವ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಬುಧವಾರ ರಾತ್ರಿ ಸಮೀಪದ ಮನೆಯ ಮಹಿಳೆಯೊಂದಿಗೆ ಮಾತನಾಡಿ ಟಿ.ವಿ. ನೋಡಿ ಪುನಃ ಮರಳಿದ್ದ ಅವರು ಉಬ್ಬಸದಿಂದ ಬಳಲುತ್ತಿದ್ದೇನೆ, ವಿಶ್ರಾಂತಿ ಬೇಕು ಎಂಬುದಾಗಿ ಸ್ಥಳೀಯ ನಿವಾಸಿ ಮಹಿಳೆಯೋರ್ವರಲ್ಲಿ ಹೇಳಿಕೊಂಡಿದ್ದರು. ಅಲ್ಲದೇ ಮುಖಕ್ಕೆ ತಲೆಗೆ ಬಟ್ಟೆಯಿಂದ ಸುತ್ತಿಕೊಂಡಿದ್ದರು ಎನ್ನಲಾಗಿದೆ. ಬುಧವಾರ ಬೆಳಿಗ್ಗೆ ಹಾಸನದ ಬೇಲೂರಿನಲ್ಲಿ ಕುಟುಂಬಿಕರ ಮನೆಯ ಮದುವೆಗೆ ಬರುವುದಿಲ್ಲವೆಂದೂ ದೂರವಾಣಿಯಲ್ಲಿ ಸಹೋದರನಿಗೆ ತಿಳಿಸಿದ್ದರು.
ಗುರುವಾರ ಬೆಳಿಗ್ಗೆ ಮನೆ ಸಮೀಪದ ಮಹಿಳೆಯೋರ್ವರು ಗಿರಿಜಮ್ಮ ಅವರ ಮನೆಗೆ ಹಾಲು ನೀಡಲು ಬಂದಾಗ ಬಾಗಿಲು ಮುಚ್ಚಿದ್ದು ಕೂಗಿದರೂ ತೆರೆಯಲಿಲ್ಲ, ಬಲವಾಗಿ ಬಾಗಿಲು ತಳ್ಳಿದಾಗ ಚಿಲಕ ತೆರೆದುಕೊಂಡಿದ್ದು ಒಳಹೊಕ್ಕು ನೋಡಿದ ಮಹಿಳೆಗೆ ಗಿರಿಜಮ್ಮರ ಶವ ಕಂಡುಬಂದಿದ್ದು, ಬಳಿಕ ವೃದ್ಧೆಯ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಹಾಸಿಗೆಯ ಮೇಲೆ ಮಲಗುವ ಗಿರಿಜಮ್ಮ ನೆಲದ ಮೇಲಿದ್ದರು. ಅಲ್ಲದೇ ಬಾಯಿ ಹಾಗೂ ಎಡಕಿವಿಗೆ ಬೆಂಡೋಲೆ ಹಾಕುವ ಜಾಗದಲ್ಲಿ ರಕ್ತಗಾಯವಾಗಿದ್ದನ್ನು ಗಮನಿಸಿ ಸಂಬಂಧಿಕರು ಕೋಟ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಮನೆಯ ಮೇಲ್ಮಾಡಿನ 3 ಹೆಂಚು ಕಿತ್ತಿದ್ದು ಇದು ಕಳ್ಳರ ಕೃತ್ಯ ಎಂದು ಸ್ಥಳೀಯರು ಗುಮಾನಿ ವ್ಯಕ್ತಪಡಿಸಿದ್ದಾರೆ. ಮೂಲವೊಂದರ ಪ್ರಕಾರ ಇಷ್ಟು ದಿನಗಳವರೆಗೂ ಮನೆಯ ಯಾವುದೇ ಹೆಂಚುಗಳನ್ನು ತೆಗೆದಿರಲಿಲ್ಲ. ಸಾಮಾನ್ಯವಾಗಿ ಬೆಳಕಿನ ವ್ಯವಸ್ಥೆಗೆ ಹಜಾರದ ಒಂದು ಹೆಂಚು ಕೀಳುವುದು ರೂಢಿ ಆದರೇ ಪ್ರಸ್ತುತ ಸ್ಥಳದಲ್ಲಿ ಮನೆಗೆ ಹೊಂದಿಕೊಂಡಿದ್ದ ಶೌಚಾಲಯದ 3 ಹೆಂಚುಗಳನ್ನು ಕಿತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದಲ್ಲದೇ ಇದು ಚಿನ್ನಾಭರಣಕ್ಕಾಗಿ ದುಷ್ಕರ್ಮಿಗಳು ಹೆಂಚು ಕಿತ್ತು ಒಳಗೆ ಪ್ರವೇಶಿಸರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಪೊಲೀಸರು ಇದೊಂದು ವ್ಯವಸ್ಥಿತ ಕೊಲೆ ಪ್ರಕರಣ ಎಂಬ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.
ವೃದ್ಧೆಯ ಕಿವಿ, ಮೂಗು ಹಾಗೂ ಕುತ್ತಿಗೆಯ ಆಭರಣಗಳು ನಾಪತ್ತೆಯಾಗಿದ್ದು, ಇದೊಂದು ಚಿನ್ನಾಭರಣ ಮತ್ತು ಹಣದ ಆಸೆಗಾಗಿಯೇ ಮಾಡಿದ ಕೊಲೆಯೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ರಾ. ಹೆ. ಆಸುಪಾಸಿನಲ್ಲಿಯೇ ನಡೆದ ಈ ಪ್ರಕರಣ ಸ್ಥಳೀಯರನ್ನೂ ಸೇರಿದಂತೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ. ಘಟನಾ ಸ್ಥಳಕ್ಕೆ ಬಂದ ಶ್ವಾನ ದಳ ಸ್ವಲ್ಪ ದೂರ ಹೋಗಿ ಹಿಂತಿರುಗಿದೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಣದ ವಿಚಾರದಲ್ಲಿ ಗಲಾಟೆ: ಚೂರಿ ಇರಿತ; ಆಸ್ಪತ್ರೆಗೆ


ಮಂಗಳೂರು: ಹಣದ ವಿಚಾರಕ್ಕೆ ಸಂಬಂಧಿಸಿ ಮೀನು ಸಾಗಾಟದ ಲಾರಿ ಚಾಲಕರ ಮಧ್ಯೆ ಹೊಡೆದಾಟ ಸಂಭವಿಸಿ ಓರ್ವ ಚೂರಿ ಇರಿತದಿಂದ ಗಾಯಗೊಂಡರೆ ಇನ್ನೋರ್ವನಿಗೆ ಹೊಡೆದಾಟದ ಸಂದರ್ಭದಲ್ಲಿ ತಲೆಗೆ ಏಟು ಬಿದ್ದಿದ್ದು, ಇಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೊಡೆದಾಟದಲ್ಲಿ ಗಾಯಗೊಂಡ ವರನ್ನು ಹಳೆಕೋಟೆ ನಿವಾಸಿಗಳಾದ ಇಕ್ಬಾಲ್ ಮತ್ತು ಶರೀಫ್ ಎಂಬವ ರಾಗಿದ್ದು, ಇಬ್ಬರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.
ಹಣದ ವಿಚಾರದಲ್ಲಿ ಗಲಾಟೆ : ಶರೀಫ್ ಮೀನು ಸಾಗಾಟದ ವಾಹನ ದಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಸಂಜೆ ಕೇರಳದಿಂದ ಮೀನು ಸಾಗಾಟ ನಡೆಸಿ ಹಳೆಕೋಟೆಗೆ ಬರುತ್ತಿದ್ದಾಗ ಇಕ್ಬಾಲ್ ಶರೀಫ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಶರೀಫ್ ನೀಡಿದ ಹೇಳಿಕೆಯಂತೆ ತಾನು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಇಕ್ಬಾಲ್ ಬಿಯರ್ ಬಾಟಲ್‍ಗಳನ್ನು ಹಿಡಿದುಕೊಂಡು ತನ್ನಲ್ಲಿ ಹಣ ಕೇಳಿದ್ದು, ನನ್ನಲ್ಲಿ ಹಣ ಇಲ್ಲ ಎಂದಾಗ ಬಾಟಲ್ ಮತ್ತು ಕತ್ತಿಯೊಂದರಲ್ಲಿ ಹಲ್ಲೆ ನಡೆಸಿದ್ದು ನಾನು ಪ್ರಜ್ಞÉ ತಪ್ಪಿ ಬಿದ್ದಾಗ ಸೊಂಟಕ್ಕೆ ಕಾಲಿನಿಂದ ತುಳಿದಿದ್ದ ಎಂದು ಹೇಳಿ ದ್ದಾರೆ. ಶರೀಫ್ ಅವರ ಭುಜಕ್ಕೆ ಕತ್ತಿಯೇಟು ಬಿದ್ದಿದ್ದು, ಕಾಲು ಮತ್ತು ಸೊಂಟಕ್ಕೆ ಪೆಟ್ಟಾಗಿದೆ. ಇಕ್ಬಾಲ್ ಪ್ರತಿಯಾಗಿ ಶರೀಫ್ ತಾನು ರಸ್ತೆಯಲ್ಲಿ ಹೋಗುತ್ತಿದ್ದಾಗ ಏನು ನೀನು ಟಿಪ್‍ಟಾಪಾಗಿ ಹೋಗುತ್ತಿ ಎಂದು ಹೇಳಿ ಹಲ್ಲೆ ನಡೆಸಿದ್ದಾನೆ ಎಂದು ದೂರು ನೀಡಿದ್ದಾನೆ. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

 
Support : Creating Website | Johny Template | Mas Template
Copyright © 2011. Jayakirana Morning News - All Rights Reserved
Template Created by Creating Website Published by Mas Template
Proudly powered by Premium Blogger Template