ಯುವತಿಯ ಗ್ಯಾಂಗ್‍ರೇಪ್ ನಗ್ನ ಸ್ಥಿತಿಯಲ್ಲೇ ರಸ್ತೆಗೋಡಿದ ಸಂತ್ರಸ್ತೆ! - Jayakirana Morning News
Headlines News :
Home » » ಯುವತಿಯ ಗ್ಯಾಂಗ್‍ರೇಪ್ ನಗ್ನ ಸ್ಥಿತಿಯಲ್ಲೇ ರಸ್ತೆಗೋಡಿದ ಸಂತ್ರಸ್ತೆ!

ಯುವತಿಯ ಗ್ಯಾಂಗ್‍ರೇಪ್ ನಗ್ನ ಸ್ಥಿತಿಯಲ್ಲೇ ರಸ್ತೆಗೋಡಿದ ಸಂತ್ರಸ್ತೆ!

Written By Umanatha Shetty on Thursday, 21 August 2014 | 22:33

ಬೆಂಗಳೂರು: ಗಣ್ಯರೆನಿಸಿಕೊಂಡ ವರ ಮಕ್ಕಳ ಕಚ್ಚೆ ಹರುಕ ಬುದ್ಧಿಯಿಂದ ಯುವತಿಯೊಬ್ಬಳು ತನ್ನ ಮಾನವನ್ನೇ ಕಳೆದುಕೊಂಡ ಘಟನೆ ಇಲ್ಲಿನ ತಾವರೆ ಕೆರೆಯ ಚಿಕ್ಕಮಾರನಹಳ್ಳಿಯೆಂಬಲ್ಲಿ ಸಂಭವಿಸಿದೆ.
ಬಿಹಾರ ಮೂಲದ ಯುವತಿ ಯನ್ನು ಡ್ರಾಪ್ ನೀಡುವ ನೆಪದಲ್ಲಿ ತನ್ನ ಕಾರಿಗೆ ಹತ್ತಿಸಿಕೊಂಡ ಅರುಣ್ ಕುಮಾರ್ ಎಂಬಾತ ಆಕೆಯನ್ನು ಬಲ ವಂತವಾಗಿ ರೆಸಾರ್ಟ್‍ವೊಂದಕ್ಕೆ ಕರೆ ದೊಯ್ದು ತನ್ನಿಬ್ಬರು ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ನಡೆಸಿರುವು ದಾಗಿ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಅತ್ಯಾಚಾರವೆಸಗಿದ ನಂತರ ಆರೋಪಿಗಳು ನಿದ್ದೆಗೆ ಜಾರಿದಾಗ ಹುಟ್ಟುಡುಗೆಯಲ್ಲೇ ರೆಸಾರ್ಟ್‍ನಿಂದ ಹೊರಗೋಡಿ ಬಂದ ಯುವತಿಯನ್ನು ಕಂಡ ಕಾರ್ ಚಾಲಕನೊಬ್ಬ ಆಕೆಯನ್ನು ರಕ್ಷಿಸಿ ಮೊದಲು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ನಂತರ ತಾವರೆಕೆರೆ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ದೂರು ದಾಖಲಿಸಿದ್ದಾನೆ.
ಅತ್ಯಾಚಾರಿಗಳ ಪೈಕಿ ಮುಖ್ಯ ಆರೋಪಿ ಅರುಣ್ ಕುಮಾರ್ ಬೆಂಗಳೂರಿನ ಮಾಗಡಿ ಕೆಎಮ್‍ಎಫ್ ನಿರ್ದೇಶಕ ನರಸಿಂಹ ಮೂರ್ತಿಯವರ ಪುತ್ರನೆಂದು ತಿಳಿದುಬಂದಿದೆ. ಉಳಿದಿಬ್ಬರು ಆರೋಪಿಗಳು ಕೂಡಾ ಗಣ್ಯರ ಪುತ್ರರೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಎಸ್‍ಪಿ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದ ಯುವತಿಯು ಮಾನಸಿಕವಾಗಿ ಜರ್ಝರಿತಗೊಂಡಿದ್ದು ಪೊಲೀಸರು ಇನ್ನಷ್ಟೇ ಮುಂದಿನ ವಿಚಾರಣೆ ನಡೆಸಬೇಕಿದೆ.
Share this article :

0 comments:

Speak up your mind

Tell us what you're thinking... !

 
Support : Creating Website | Johny Template | Mas Template
Copyright © 2011. Jayakirana Morning News - All Rights Reserved
Template Created by Creating Website Published by Mas Template
Proudly powered by Premium Blogger Template