ಹೇಳಿಕೇಳಿ ಈಗ ಆ್ಯಪ್ಸ್‍ಗಳ ಯುಗ. ಫೇಸ್‍ಬುಕ್ ಹಳೆಯದಾಯಿತು ಎಂಬಂತೆ ವಾಟ್ಸ್‍ಆ್ಯಪ್ ಯುವಜನತೆಯಲ್ಲಿ ಹೆಚ್ಚಿನ ಕ್ರೇಜ್ ಮೂಡಿಸುತ್ತಿದೆ. ಆದರೆ ಆರೋಗ್ಯಪೂರ್ಣ ಮೋಜಿಗಾಗಿ ಇರಬೇಕಾದ ಇಂತಹ ಸೌಲಭ್ಯಗಳನ್ನು ಯುವಜನತೆ ತಮ್ಮ ವಿಕೃತ ಮೋಜಿಗಾಗಿ ಉಪಯೋಗಿಸುತ್ತಿರುವುದು ದುರದೃಷ್ಟಕರ. ಅದರಲ್ಲೂ ಯುವತಿಯರೇ ಇದಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಅಂಶ. ಇತ್ತೀಚಿಗೆ ಹಲವಾರು ವಿವಾದಾತ್ಮಕ ಪ್ರಸಂಗಗಳಿಗೆ ವಾಟ್ಸ್‍ಆ್ಯಪ್ ಕಾರಣವಾಗುತ್ತಿದೆ. ಕೋಮು ಪರಿಸ್ಥಿತಿ ಇರಲಿ ಅಥವಾ ಸಮಾಜದ ಸಾಸ್ಥ್ಯ ಕೆಡಿಸುವ ಇಂತಹ ವಿಚಾ ರಗಳಿಗೆ ಯಾವಾಗ ಕೊನೆ ಬೀಳುವುದೋ ಎಂಬುದು ಪ್ರಜ್ಞಾವಂತರಿಗೆ ಪ್ರಶ್ನೆಯಾಗಿ ಕಾಡುತ್ತಿದೆ.
ಮಂಗಳೂರು: ಗುರುಪುರ ಕೈಕಂಬದ ಜೋಡಿಹಕ್ಕಿಗಳ ಹಾಟ್ ಕಿಸ್ಸಿಂಗ್ ಸೀನ್ ಒಂದು ವಾಟ್ಸ್‍ಆ್ಯಪ್ ನಲ್ಲಿ ಒಬ್ಬರಿಂದೊಬ್ಬರಿಗೆ ಹರಿದಾಡು ತ್ತಿದ್ದು, ಪಡ್ಡೆಗಳ ಪಾಲಿಗೆ ರಸದೌತಣ ಒದಗಿಸಿದ್ದಷ್ಟೇ ಅಲ್ಲದೆ ಆತಂಕಕ್ಕೂ ಕಾರಣವಾಗಿದೆ.
ವೃತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿರುವ ಗುರುಪುರ ಕೈಕಂಬ ಸಮೀಪದ ಈತ ಶೋಕಿ ಜೀವನ ನಡೆಸಲು ಬೈಕ್ ಖರೀದಿಸಿ ಹುಡುಗಿಯರನ್ನು ಪಟಾಯಿಸು ವುದನ್ನೇ ಕಾಯಕ ಮಾಡಿಕೊಂಡಿದ್ದಾನೆ ಎಂದು ಸಾರ್ವಜನಿಕರು ಹೇಳು ತ್ತಿದ್ದಾರೆ.
ಇಲ್ಲಿನ ಸ್ಥಳೀಯ ಬಡ ಯುವತಿ ಯನ್ನು ತನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಪಟಾಯಿಸಿದ ಈತ ಒಂದು ದಿನ ತನ್ನ ಫ್ರೆಂಡ್ ಜೊತೆ ಪಿಕ್‍ಅಪ್ ಮಾಡಿಕೊಂಡು ಹೋಗಿದ್ದಾನೆ. ನಂತರ ಆಕೆಯನ್ನು ತನ್ನ ಗೆಳೆಯರ ಮುಂದೆ ನಿಲ್ಲಿಸಿ ಯುವತಿಯ ತುಟಿಗೆ ತನ್ನ ತುಟಿಯಿಂದ ಮುದ್ರೆಯೊತ್ತಿದ್ದಾನೆ ಎನ್ನಲಾಗಿದೆ. ಈ ದೃಶ್ಯವನ್ನು ಗೆಳೆಯರಲ್ಲಿ ಮೊಬೈಲ್ ಮೂಲಕ ಚಿತ್ರೀಕರಿಸಲು ಹೇಳಿ ಬಳಿಕ ವಾಟ್ಸ್‍ಆ್ಯಪ್‍ನಲ್ಲಿ ಒಬ್ಬರಿಂದೊಬ್ಬರಿಗೆ ಕಳಿಸಿ ವಿಕಟನಗೆ ಬೀರುತ್ತಿದ್ದಾನೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಗುರುಪುರ ಕೈಕಂಬದಲ್ಲಿ ಅದೆಷ್ಟೋ ಬಡಯುವತಿಯರು ತಮ್ಮ ಹೊಟ್ಟೆಪಾಡಿಗಾಗಿ ಶಾಪ್‍ಗಳಲ್ಲಿ ಚಿಕ್ಕಾಸಿನ ಸಂಬಳಕ್ಕಾಗಿ ಜೀತದಂತೆ ದುಡಿಯುತ್ತಿದ್ದಾರೆ. ಇಂಥವರನ್ನೇ ಬುಟ್ಟಿಗೆ ಹಾಕುವ ಕೆಲಸ ಮಾಡುವ ಕೆಲವು ಹಡಬೆ ಯುವಕರು ಕೈಕಂಬದಲ್ಲಿ ಸಾಮಾನ್ಯವಾಗಿದ್ದು, ಯುವತಿಯರ ಬಾಳಲ್ಲಿ ಚೆಲ್ಲಾಟವಾಡುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ಒದಗಿಸಿದ್ದಾರೆ. ಸದ್ಯ ಈಗ ಮೊಬೈಲ್‍ನಲ್ಲಿ ಹರಿದಾಡುತ್ತಿರುವ ಹಾಟ್‍ಕಿಸ್ಸಿಂಗ್ ಸೀನ್ ಚರ್ಚೆಯ ಕೇಂದ್ರಬಿಂದುವಾಗಿದೆ.
0 comments:
Speak up your mind
Tell us what you're thinking... !