ಟೆಲ್ ಅವಿವ್: ತಮ್ಮ ನಾಯಕ ರನ್ನು ಕೊಲ್ಲಲು ಇಸ್ರೇಲ್ ಹೂಡಿದ ತಂತ್ರ ವಿಫಲವಾಗಿದೆ ಎಂದು ಗೇಲಿ ಮಾಡುವ ವೀಡಿಯೊ ಚಿತ್ರಣವನ್ನು ಹಮಸ್ ಪಡೆ ಬಿತ್ತರಿಸಿದ ಒಂದೇ ದಿನದ ಅಂತರದಲ್ಲಿ ಇಸ್ರೇಲ್ ರಾಕೆಟ್ ದಾಳಿ ನಡೆಸಿ ಹಮಸ್‍ನ ಮೂವರು ಉನ್ನತ ನಾಯಕರನ್ನು ಹತ್ಯೆ ಮಾಡುವ ಮೂಲಕ ನಮ್ಮಿಂದ ಯಾರೂ ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶ ವನ್ನು ಗಾಝಾ ಉಗ್ರರಿಗೆ ರವಾನಿಸಿದೆ.
ಇಸ್ರೇಲ್ ಪಡೆಯು ರಾಕೆಟ್ ದಾಳಿ ನಡೆಸುವ ಮೂಲಕ ಹಮಸ್‍ನ ಹಿರಿಯ ಕಮಾಂಡರ್ ಮೊಹಮ್ಮದ್ ದೈಫ್‍ನನ್ನು ಹತ್ಯೆ ಮಾಡಲು ಯತ್ನ ನಡೆಸಿತ್ತು. ಈ ದಾಳಿಯ ಮುನ್ನವೇ ದೈಫ್ ತಪ್ಪಿಸಿ ಕೊಂಡಿದ್ದು ದಾಳಿಯಲ್ಲಿ ಆತನ ಪತ್ನಿ ಮತ್ತು ಹಸುಳೆ ಮೃತಪಟ್ಟಿತ್ತು. ಇದನ್ನೇ ನೆಪವಾಗಿ ಬಳಸಿಕೊಂಡ ಹಮಸ್ ಪಡೆಯ ಮುಸುಕುಧಾರಿ ಉಗ್ರನೊಬ್ಬ ಇಸ್ರೇಲ್‍ನ್ನು ಗೇಲಿ ಮಾಡುವ ರೀತಿ ಯಲ್ಲಿ ಮಾತನಾಡುತ್ತಾ, ನಮ್ಮನ್ನು ತಲುಪುವ ನಿಮ್ಮ ಎಲ್ಲಾ ಪ್ರಯತ್ನಗಳು ವಿಫಲವಾಗಲಿವೆ ಎಂದು ತಮಾಷೆ ಮಾಡುವ ದೃಶ್ಯಾವಳಿಗಳನ್ನು ಹಮಸ್ ಬಿಡುಗಡೆ ಮಾಡಿದ್ದ. ಇದರಿಂದ ಆಕ್ರೋಶಗೊಂಡ ನೆತನ್ಯಾಹು ಪಡೆ ನಿಖರ ಮಾಹಿತಿಯೊಂದಿಗೆ ಗಾಝಾದ ಅತ್ಯಂತ ಜನನಿಬಿಡ ಪ್ರದೇಶ ರಫಾದ ಮೇಲೆ ರಾಕೆಟ್ ದಾಳಿ ನಡೆಸಿ ಹಮಸ್‍ನ ಮೂವರು ಉನ್ನತ ಕಮಾಂಡರ್‍ಗಳನ್ನು ಕೊಂದು ಹಾಕಿದೆ.
ಘಟನೆಯ ನಂತರ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಂಬಲರ್ಹ ಮಾಹಿತಿ ನೀಡಿದ ಗುಪ್ತಚರ ಪಡೆ ಮತ್ತು ನಿಖರ ದಾಳಿ ಸಂಘಟಿಸಿದ ಸೇನೆಗೆ ಅಭಿನಂದನೆ ಗಳನ್ನು ತಿಳಿಸಿದ್ದಾರೆ. ಈ ದಾಳಿಯಿಂದ ಹಮಸ್‍ನ ಯಾವೊಬ್ಬ ಉಗ್ರ ಕೂಡಾ ನಮ್ಮ ಗುರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಾಗಿದೆ ಎಂದು ನೆತನ್ಯಾಹು ತಿಳಿಸಿದ್ದಾರೆ. ರಾಕೆಟ್ ದಾಳಿಯಲ್ಲಿ ಮೂವರು ಉಗ್ರರ ಜೊತೆಗೆ ಐವರು ನಾಗರಿಕರು ಹತರಾಗಿದ್ದಾರೆ.

0 comments:
Speak up your mind
Tell us what you're thinking... !