ಉಡುಪಿ: ಬಾವಿಗೆ ಬಿದ್ದ ಮೂರು ವರ್ಷದ ಚಿರತೆಯನ್ನು ಮೇಲಕ್ಕೆತ್ತಲು ಬಂದ ಅರಣ್ಯಾಧಿಕಾರಿಗಳೊಂದಿಗೆ ಸ್ಥಳೀಯರು ಮಾತಿನ ಚಕಮಕಿ ನಡೆಸಿದ ಘಟನೆ ಗುರುವಾರ ಹಾವಂಜೆ ಸಮೀಪದ ಇರ್ಮಾಡಿ ಸೊರ್ಪುವಿನಲ್ಲಿ ನಡೆದಿದೆ.
ಸೊರ್ಪುವಿನ ಬಾಲಕೃಷ್ಣ ಪೂಜಾರಿ ಎಂಬವರ ಮನೆಯ ಬಾವಿಗೆ ಬುಧ ವಾರ ರಾತ್ರಿ ಸುಮಾರು 11 ಗಂಟೆಗೆ ಏನೋ ಬಿದ್ದಂತೆ ದೊಡ್ಡದಾಗಿ ಶಬ್ದವಾಗಿದ್ದು, ರಾತ್ರಿ ಮಳೆ ಗಾಳಿಗೆ ಸಮೀಪದ ಹಾಡಿಯಲ್ಲಿ ಮರ ಬಿದ್ದಿರಬಹುದು ಎಂದು ಮನೆಯವರು ಸುಮ್ಮನಿದ್ದರು. ಗುರುವಾರ ಬೆಳಿಗ್ಗೆ ಮನೆಯವರು ಬಾವಿಯಿಂದ ನೀರು ಸೇದಲು ಬಂದಾಗ ಬಾವಿಯಲ್ಲಿ ಚಿರತೆ ಇರುವುದು ಕಂಡು ಗಾಬರಿಯಾ ಗಿದ್ದಾರೆ.
ಮನೆಯವರು ಕೂಡಲೇ ಸ್ಥಳೀಯ ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದು ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸುಮಾರು 9 ಗಂಟೆಗೆ ಬಂದ ಅರಣ್ಯ ಇಲಾಖೆಯ ಸಿಬಂದಿ ಚಿರತೆಯನ್ನು ಬಾವಿಯಿಂದ ಮೇಲೆತ್ತಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿ ಬಳಿಕ ಏಣಿ ಇಟ್ಟು ಬಾವಿಯಿಂದ ಮೇಲೆ ಬರುವಂತೆ ಮಾಡಲು ನಿರ್ಧರಿಸಿದರು. ಆದರೆ ಇದಕ್ಕೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆರೂರಿನಿಂದ ಬೋನನ್ನು ತಂದು ಅದನ್ನು ಹಗ್ಗದ ಮೂಲಕ ಬಾವಿಗೆ ಇಳಿಸಿ ಅದರೊಳಗೆ ಚಿರತೆ ಹೋಗು ವಂತೆ ಪ್ರಯತ್ನಿಸಲಾಯಿತು. ಸುಮಾರು 2 ಗಂಟೆಗಳ ಪಯತ್ನದ ಬಳಿಕ ಚಿರತೆಯು ಬೋನಿನೊಳಗೆ ಹೋದ ಬಳಿಕ ಬಾವಿಯಿಂದ ಮೇಲೆತ್ತ ಲಾಯಿತು. ಬಳಿಕ ಚಿರತೆಯನ್ನು ಅರಣ್ಯಾಧಿ ಕಾರಿಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟರು.
ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಕುರಿತು ಗ್ರಾಮಸ್ಥರ ಆಕ್ಷೇಪ: ಇರ್ಮಾಡಿ ಪರಿಸರ ಕಾಡಿನಿಂದ ಕೂಡಿದ್ದು ಕಳೆದ ಹಲವು ದಿನಗಳಿಂದ ಚಿರತೆಗಳು ಸ್ಥಳೀಯರಿಗೆ ಕಾಣಸಿಕ್ಕಿವೆ. ಇದರಿಂದ ಮಕ್ಕಳು ಶಾಲೆಗೆ ತೆರಳಲು ಹೆದರುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೆ ಚಿರತೆಗಳನ್ನು ಹಿಡಿಯಲು ಜಿಲ್ಲೆಯಲ್ಲಿ ಅರಿವಳಿಕೆ ತಜ್ಞರ ಕೊರತೆ ಇದೆ ಎಂದು ಸಬೂಬು ನೀಡುತ್ತಾರೆ. ಕಾಡುಪ್ರಾಣಿ ಗಳ ಹಾವಳಿಯಿಂದಾಗಿ ಇಲ್ಲಿನ ಕುಟುಂಬಗಳು ತಿರುಗಾಡಲು ಸಹ ಭಯಪಡುತ್ತಾರೆ ಎಂದು ಗ್ರಾಮಸ್ಥರು ಮಾಧ್ಯಮದವರ ಬಳಿ ತಮ್ಮ ಅಳಲನ್ನು ತೋಡಿ ಕೊಂಡರು.

0 comments:
Speak up your mind
Tell us what you're thinking... !